Saturday, September 11, 2010

ಗಾರೆಹಚ್ಚೇನಿಲ್ಲ ದಾರು ದೂಲಗಳಲ್ಲ

ಗಾರೆಹಚ್ಚೇನಿಲ್ಲ ದಾರು ದೂಲಗಳಲ್ಲ |
ಪಾರದ ದ್ರವದವೊಲು ಮನುಜಸ್ವಭಾವ ||
ವೀರಶಪತಗಳಿಂದ ಘನರೂಪಿಯಾಗದದು |
ಸೈರಿಸನಿನಿತು ನೀಂ ಮಂಕುತಿಮ್ಮ ||

ಮನುಷ್ಯನ ನಡವಳಿಕೆ ಅಥವ ಅವನ ಸ್ವಭಾವ ಸಿಮೆಂಟ್ ಗಾರೆಯಂಥಹ ಒಂದೇ ಸಮವೇನಿರುವುದಿಲ್ಲ. ಅಂತೆಯೇ ಮರದ ತೊಲೆಯಂತೆಯೂ ಇರುವುದಿಲ್ಲ. ನಮ್ಮ ನಮ್ಮ ಸ್ವಭಾವ ಪಾದರಸದಂತೆ ಹರಿದಾದುವ ಚಂಚಲತೆಯಿಂದ ಕೂಡಿರುವಂಥದ್ದು. ಯಾವುದೇ ಕಾರಣಕ್ಕೂ ಅಣೆ ಪ್ರಮಾಣದಿಂದ ನಿಲ್ಲಿಸೋಕೂ ಆಗುವುದಿಲ್ಲ. ಬಂದದ್ದೆಲ್ಲಾ ಛಲದಿಂದ ಎದುರಿಸಿ ಸೈರಿಸಲೇ ಬೇಕು. ಅಂತಹ ಛಲ, ಧೈರ್ಯ ವಿಘ್ನವಿನಾಶಕನಾದ ನಮ್ಮ ಗಣಪತಿಯು ನೀಡಲಿ, ಅಗ್ರಗಣ್ಯಪೂಜಿತನೆಂದು ಪ್ರಸಿದ್ದಿ ಪಡೆದ ವಿನಾಯಕನು ತಮ್ಮ ಇಷ್ಟಾರ್ಥ ನೇರವೇರಿಸಲಿ, ಸಕಲ ವಿಘ್ನಗಳನ್ನೂ ನಿವಾರಿಸಲೆಂದು ಪ್ರಾಥನೆ ಮಾಡಿಕೊಳ್ಳುತ್ತಾ ಗಣೇಶನ ಹಬ್ಬದ ಶುಭದಿನದಂದು, ಅರ್ಕುಟ್‌ನ ಸ್ನೇಹಿತರೂ, ಗುರುಸಮಾನರಾದ ಶ್ರೀ ಶ್ರೀನಿವಾಸರ ಆಶೀರ್ವಾದದೊಂದಿಗೆ ಜಗನ್ಮಾತೆಯ "ಸೌಂದರ್ಯಲಹರಿ" ಶ್ರೀ ಶಂಕರಾಚಾರ್ಯರು ಬರೆದ ಸೋತ್ರ ಹಾಗು ಅರ್ಥವನ್ನು ಈ ಕೆಳಗೆ ಹೇಳಿದ ಸಮುದಾಯದಲ್ಲಿ ಇಂದಿನಿಂದ ಪ್ರಾರಂಭಿಸುತ್ತೇನೆ. ತಾಯಿ ಮಂಗಳಸ್ವರೂಪಿನಿಯಾದ ಶ್ರೀಗೌರಿಯ ಕೃಪಕಟಾಕ್ಷ ಸಿದ್ದಿಸಿ, ಗಣಪತಿಯ ಆಶೀರ್ವಾದ ಲಭಿಸಲಿ. ಗೌರಿ-ಹಣೇಶ ಹಬ್ಬದ ಶುಭಾಶಯಗಳು ನನ್ನ ಸನ್ಮಿತ್ರರಿಗೆhttp://www.orkut.co.in/Main#CommMsgs?cmm=94754291&tid=5502869896806510227
ಆಸಕ್ತಿಯುಳ್ಳವರು ಓದಿದರೆ ಹೇಳಿದ ಪುಣ್ಯ ನನಗೆ, ಓದಿದ ಪುಣ್ಯ ನಿಮಗೆ

No comments:

Post a Comment