Tuesday, September 7, 2010

ಕಟ್ಟಡದ ಪರಿಯನಿಟ್ಟಗೆಯಂತು ಕಂಡೀತು ?

*****
ಇಂದು ಡಿ.ವಿ.ಜಿ ಯವರ ಹುಟ್ಟುಹಬ್ಬ.. ಕನ್ನಡ ಭಗವದ್ಗೀತೆ ಎಂದೇ ಹೆಸರಾಗಿರುವ "ಮಂಕುತಿಮ್ಮನ ಕಗ್ಗ" ರಚಿಸಿ ಸಾಮಾನ್ಯ ಜನರಿಗೆ ಅರ್ಥ ಅಗೋ ಹಂಗೆ ಬರೆದು, ಜೀವನದ ಪಾಠ ಕಳಿಸಿದ ಆ ಗುರುವಿಗೆ ವಂದನೆ ಸಲ್ಲಿಸುತ್ತಾ..
ಕಟ್ಟಡದ ಪರಿಯನಿಟ್ಟಗೆಯಂತು ಕಂಡೀತು ?
ಗಟ್ಟಿನಿಲದದು ಬೀಳೆ ಗೋಡೆ ಬಿರಿಯುವುದು
ಸೃಷ್ಟಿ ಕೊಟೆಯಲಿ ನೀನೊಂದಿಟಿಕೆ : ಸೊಟ್ಟಾಗ
ಪೆಟ್ಟು ತಿನ್ನುವೆ ಜೋಕೆ - ಮಂಕುತಿಮ್ಮ

ಕಟ್ಟಡದ ಒಂದಂಶ ಇಟ್ಟಿಗೆ, ಅದರೂ ಅದು ಕಟ್ಟಡದ ಭವ್ಯತೆಯನ್ನು ತಿಳಿಯದಲ್ಲವೆ? ಆದರೆ ಇಟ್ಟಿಗೆ ಗಟ್ಟಿಯಾಗಿರದಿದ್ದರೆ ಗೋಡೆ ಬಿರುಕು ಬಿಟ್ಟು ಬೀಳುವುದು ಶತಸಿದ್ದವಲ್ಲವೆ? ಗಟ್ಟಿಮುಟ್ಟಾದ ಇಟ್ಟಿಗೆ ಎಷ್ಟು ಮುಖ್ಯ ನೋಡಿ? ಅಂತೆಯೇ ನಮ್ಮ ಬಾಳಜೀವನದ ಕೋಟೆಯಲ್ಲಿಯೂ ನೀವೆಲ್ಲರೂ ಗಟ್ಟಿಇಟ್ಟಿಗೆಗಳಾಗಿರಿ ಎಂದೇ ನನ್ನ ಕೋರಿಕೆ... ಎಂದಿನಂತೆ ನಿಮ್ಮ ಸ್ನೇಹಿತ ರವಿಯ ಶುಭನುಡಿ - ಶುಭದಿನ ಶುಭೋದಯ
******

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು
ತಿಂದು ನಿನ್ನನ್ನಋಣ ತೀರುತಲೆ ಪಯಣ
ಹಿಂದಾಗದೊಂದು ಚಣ, ಮುಂದಕುಂ ಕಾದಿರದು
ಸಂದ ಲೆಕ್ಕವದಲ್ಲ - ಮಂಕುತಿಮ್ಮ
ನಮ್ಮ ಪಾಲಿನ ಅನ್ನದಗಳು ಹೆಚ್ಚೂ ಆಗದು ಅಂತೆಯೇ ಕಡಿಮೆಯೂ ಆಗದು. ಅದು ನಿಗದಿಯಾದಷ್ಟೇ ನಮ್ಮನ್ನ ಉಂಡು ಅದರ ಲೆಕ್ಕ ಮುಗಿಯುತ್ತಲೇ ನಮ್ಮ ಪಯಣ... ಅದು ಒಂದು ಕ್ಷಣ ಕಾಲವೂ ಹಿಂದೂ ಅಗದು, ಮುಂದೂ ಅಗದು.. ಕರಾರುವಾಕ್ ಸಮಯ... ಅದರ ನಡುವೆ ಮಾನವ ಸಂಘಜೀವಿಯಾಗಿ ಅನ್ಯರ ಕಷ್ಟಕ್ಕೆ , ಸ್ನೇಹಿತರ ಸುಖದುಃಖಗಳಿಗೆ ನೆರವಾಗಿ, ಬಂಧು-ಬಾಂಧವರೊಂದಿಗೆ ಮತ್ತು ಕುಟುಂಬದ ಸಹಸದಸ್ಯರೊಂದಿಗೆ ಆನಂದದಿಂದ ಜೀವಿಸಲಿ, ಆ ಪರಮಾತ್ಮನ ದಯೆ ಇರಲೆಂದು ಬೇಡುತಾ ನನ್ನ ನೆಚ್ಚಿನ ತಿಮ್ಮ ತಿಮ್ಮಿಯರಿಗೆ ಒಳ್ಳೇದಾಗಲೆಂದು ಕೋರುತಾ ಎಂದಿನಂತೆ ಶುಭದಿನ ಶುಭೋದಯ ಹಾಗು ಶುಭವಾರಂತ್ಯ ಮಿತ್ರರೆ

ಸೌಂದರ್ಯ ಬಾಂಧವ್ಯಗಳು ಬರಿದೆನೆಲಹುದೆ?
ಹೊಂದಿಸವೆ ಕುಂದಿಸವೆ ಜೀವಿಗಳನೆವುಗಳ್
ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು
ಅಂದಿಕೊಳಲದು ಬರಿದೆ? - ಮಂಕುತಿಮ್ಮ

ಸೌಂದರ್ಯ ಮತ್ತು ಬಾಂಧವ್ಯ ಸಾಧಾರಣ ಎನ್ನಲಾಗುವುದಿಲ್ಲ. ಅವು ಜೀವಿಗಳನ್ನು ಹೊಂದಿಸುತ್ತದೆ ಮತ್ತು ಕುಂದಿಸುತ್ತದೆ. ಜೀವಿಗಳನ್ನು ಹೊಂದಿಸುವುದಕ್ಕೆ ಎಂತಹ ಮಧುರ ವಾತಾವರಣವಿರಲಿ, ಅಥವ ಯಾವುದೇ ಋತುಮಾನವಿರಲಿ ಅವು ಸಾಧ್ಯ... ಆದರೆ ಅದೇ ಈ ಸೌಂದರ್ಯ ಮತ್ತು ಬಾಂಧವ್ಯವು ತುಂಬು ಪ್ರವಾಹದಲ್ಲಿ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದಾಗಲೂ ಪರಸ್ಪರ ಅಪ್ಪಿಕೊಂಡಿರಲು ಸಾಧ್ಯವೆ? ಒಟ್ಟಿನಲ್ಲಿ ವಿಧಿಯ ಕೈಗೊಂಬೆಗಳಾಗಿ ನಮ್ಮ ಜೀವನ ನಾಟಕದಲ್ಲಿ ಯಶಸ್ವಿಯಾಗಬೇಕಷ್ಟೆ... ಸ್ನೇಹಿತರೆ ಎಂದಿನಂತೆ ನಿಮಗೆ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಕಾಯವನು ಮೃದ್ಬಾಂಡ ಮಾಂಸಪಿಂಡವೆನುತ್ತೆ
ಹೇಯವೆಂದಂದೊಡಾತ್ಮಂಗಪ್ಪುದೇನು?
ಆಯುಧವನದನು ತೊರೆದಾತ್ಮನೇಂಗೈದಪನು
ನ್ಯಾಯ ತನುವಿಗಮಿರಲಿ - ಮಂಕುತಿಮ್ಮ
ನಮ್ಮ ಈ ದೇಹವನ್ನು ಮಣ್ಣಿನ ಕುಡಿಕೆ, ಮಾಂಸದ ಮುದ್ದೆ ಅಥವಾ ಇದು ಶಾಶ್ವತವಲ್ಲದ್ದು, ಅಶಾಶ್ವತ, ಅಸಹ್ಯಕರ ಎಂದು ನಮ್ಮ ದೇಹವನ್ನು ನಾವೇ ಯಾಕೆ ಹಿಯಾಳಿಸಬೇಕು... ಅದರಿಂದ ನಮ್ಮ ಒಳಗಿರುವ ಅತ್ಮನಿಗೆ ಏನೂ ಅಗದಿದ್ದರೂ ಕಸಿವಿಸಿಗೊಳ್ಳಬಹುದು, ಆ ಅತ್ಮಚೈತನ್ಯಕ್ಕೆ ನಮ್ಮ ಈ ದೇಹವೇ ಮುಖ್ಯ ಸಾಧನ, ಅವನು ಈ ದೇಹದೊಳಗೆ ಇರುವ ಕಾರಣದಿಂದ ನಮ್ಮ ದೇಹಕ್ಕೂ ನ್ಯಾಯ ಸಲ್ಲಬೇಕು.. ನನ್ನ ಪ್ರಿಯ ಸ್ನೇಹಿತ/ಸ್ನೇಹಿತೆಯರೆ.. ನಿಮ್ಮೀ ದೇಹಸಿರಿಯನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಿ, ಅದೇ ನಿಜವಾದ ಸಿರಿ, ನಿಮ್ಮ ದೇಹದೊಳಗಿರುವ ಅತ್ಮಕ್ಕೂ ಮತ್ತು ನಿಮ್ಮನ್ನು ನೋಡಿದವರಿಗೂ ಉತ್ಸಾಹ, ಸಂತೋಷ. ಎಂದಿನಂತೆ ನಿಮ್ಮ ಸ್ನೇಹಿತನಾದ ರವಿ ಹೇಳೋದು ಶುಭದಿನ ಶುಭೋದಯ

ಗುಹೆಯೇಡಕೆ, ಗುಹೆ ಬಲಕೆ, ನಡುವೆ ಮಲೆ : ಕಣಿವೆಯಲಿ
ವಿಹರಿಪೆ ಹುಲಿ ಬಾರದೆಂದು ನೀಂ ನಚ್ಚಿ?
ರಹಸಿಯದ ಭೂತ ಪಿಡಿಯದ ತೆರದಿ ಬದುಕ
ನಿರ್ವಹಿಸುವುದೆ ಜಾಣ್ಮೆಯಲಿ - ಮಂಕುತಿಮ್ಮ
ನಮ್ಮ ಬಾಳಜೀವನದಲ್ಲಿ ಎಡಕೆ ಒಂದು ಗುಹೆ, ಬಲಕೆ ಮತ್ತೊಂದು ಗುಹೆ... ನಡುವೆಬೆಟ್ಟ ಕಣೆವೆಯ ಹಾದಿಯ ಏರುಪೇರಿನ ಮಾರ್ಗದಲ್ಲಿ ನಮ್ಮ ಜೀವನ ಸವೆಸುತ್ತಿದ್ದಾಗ ಹುಲಿ ಬಾರದೆಂದು ನಂಬಲಾಗುವುದಿಲ್ಲ. ಬಂದರೂ ಬರಬಹುದು....ಆದರೆ ಸಂಶಯದ ಭೂತ ಮಾತ್ರ ಬಂದು ಹಿಡಿಯದಂತೆ ಎಚ್ಚರವಹಿಸಲೇ ಬೇಕು. ಅಂತಹ ಜಾಣ್ಮೆ ನನ್ನ ನೆಚ್ಚಿನ ತಿಮ್ಮ/ತಿಮ್ಮಿಯರಿಗೆ ಬರಲೆಂದು ಆಶಿಸುತ್ತಾ ಎಂದಿನಂತೆ ಪ್ರೀತಿಯ ಶುಭದಿನ ಶುಭೋದಯ

ಅಕ್ಕಿಯೊಳಗನ್ನವನು ಮೊದಲಾರು ಕಂಡವನು?
ಅಕ್ಷರದ ಬರಹಕ್ಕೆ ಮೊದಲಿಗನಾರೋ ?
ಲೆಕ್ಕವಿರಿಸಿದವರಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೆ ನಿನಗೆ ಜಸ ? - ಮಂಕುತಿಮ್ಮ
ಅಕ್ಕಿಯಿಂದ ಮೊದಲು ಅನ್ನವನ್ನು ಕಂಡವನಾರು? ಅಕ್ಷರದಿಂದ ಮೊದಲು ಬರಹವನ್ನು ಬರೆದವನಾರು? ಈ ಪ್ರಶ್ನೆಗೆ ಜಗತ್ತು ಇಲ್ಲಿಯವರೆಗೂ ಉತ್ತರವನ್ನೆ ಕೊಟ್ಟಿಲ್ಲ ಹಾಗು ಯಾರ ಹೆಸರನ್ನೂ ದಾಖಲಿಸಿಲ್ಲ. ಹೀಗಿದ್ದಾಗ ಯಶಸ್ಸು ನಮ್ಮದು ನಮ್ಮದು ಅಂತ ಬಡಿದಾಡಿಕೊಳ್ಳುವುದೇಕೆ? ಅದು ಹೆಂಗೆ ನಮಗೆ ದಕ್ಕುವುದು?? ಸ್ನೇಹಿತರೆ ರವಿಯು ನಿಮಗೆ ಎಂದಿನಂತೆ ವಿನಯಪೂರ್ವಕವಾಗಿ, ಸ್ನೇಹಶೀಲನಾಗಿ ಶುಭದಿನ ಶುಭೋದಯ ಎಂದೆನುತಾ ಕಾಯಕದಡೆಗೆ ಪಯಣ

ಅಳೆವರಾರ್ ಪೆಣ್‌ಗಂಡುಗಳನಳೆವ ನೂಲುಗಳ?
ಕೆಳೆಪಗೆಗಳೆಲ್ಲವಾಳದಲ್ಲಿ ಬಲು ತೊಡಕು
ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ
ತಿಳಿಯಗೊಡನದ ನಮಗೆ - ಮಂಕುತಿಮ್ಮ
ಹೆಣ್ಣು - ಗಂಡುಗಳನ್ನು ಪರಸ್ಪರ ಸೆಳೆದ ಪ್ರೇಮದ ಎಳೆಗಳನ್ನು ಅಳೆಯಲು ಯಾರಿಂದ ಸಾಧ್ಯ?? ಅಬ್ಬಾ ಅಂತಹ ಶಕ್ತಿಯನ್ನು ಅನುಭವಿಸಿ ನೋಡಿ ತಿಳಿಯಬಹುದೆ ಹೊರತು ಅಳೆಯಲು ಸಾಧ್ಯವೇ ನನ್ನ ಪ್ರಿಯ ತಿಮ್ಮ/ತಿಮ್ಮಿಯರೆ ?? ಆ ಅಳದಲ್ಲಿ ಎಂತಹ ಸೆಳೆತವಿದೆ? ಎಂತಹ ಮಧುರಾಮೃತವಿದೆ? ಅಬ್ಬಬ್ಬಾ ವರ್ಣಿಸಲು ಕುಳಿತರೆ ಇಪ್ಪತ್ತನಾಲ್ಕು ಘಂಟೆಯೂ ಸಾಲದು ಭೂಮಿಯ ಋಣಗಳ ಲೆಕ್ಕವೇನೋ ಇದೆ. ಆದರೆ ಬ್ರಹ್ಮನು ಬರೆದ ಬರಹರೂಪದಲ್ಲಿ ತಿಳಿಯಗೊಡುತ್ತಿಲ್ಲವಲ್ಲ? ಹೋಗಲಿ ಬಿಡಿ ತಿಳಿದು ಅಷ್ಟು ದೊಡ್ಡ ಬುದ್ದಿಜೀವಿಯೆಂದು ಅನಿಸದಿದ್ದರೂ ಪರಸ್ಪರ ಪ್ರೇಮದ ಸೆಳೆತದ ಎಳೆಗಳಲ್ಲಿ ಅನಂದವಾಗಿ ಇರಿ ಜೊತೆಗೆ ಜೀವನದ ಕರ್ತವ್ಯಗಳನ್ನು ಮರೆಯದೆ ಮಾಡುತ್ತಾ ಸುಖವಾಗಿ ಕಾಲ ಕಳೆಯಿರೆಂದು ಆಶಿಸುತ್ತಾ ನಿಮ್ಮ ಸ್ನೇಹಿತನಾದ ರವಿಯು ಶುಭೋದಯ, ಶುಭದಿನ ಎನ್ನುತಾ ರೈಟ್ ಹೇಳದೆ ಇಂದು ಪ್ರೇಮದ ಎಳೆಗಳಲ್ಲಿನ ಸುವಾಸನಾಭರಿತ ಕಂಪನ್ನು ಅಸ್ವಾದಿಸುತ್ತಾ, ಅದೇ ಗುಂಗಿನಲ್ಲಿ ಇಂದಿನ ಕೆಲಸ ಮುಗಿಸಲು ಆಣಿಯಾಗುತ್ತಿದ್ದೇನೆ

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ
ಇಷ್ಟಮೋಹಕ ದಿವ್ಯಗುಣಗಳೊಂದು ಕಡೆ
ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ
ಈ ಬೃಹತ್ ಬ್ರಹ್ಮಾಂಡದ ಸೃಷ್ಟಿಯ ಆಶಯಗಳೇ ತಿಳಿಯಗೊಡುವುದಿಲ್ಲ. ಸ್ಪಷ್ಟತೆ ತಿಳಿಯುವುದೇ ಕಷ್ಟ. ಮನಕೆ ಉಲ್ಲಾಸ, ಸಂತೋಷ ಇಷ್ಟಗಳನ್ನು ನೀಡುವ ಮನಮೋಹಕವಾದ ದಿವ್ಯಗುಣಗಳು ಒಂದೆಡೆ, ಮತ್ತೊಂದು ಕಡೆ ಅಷ್ಟ ಕಷ್ಟಗಳ ಸರಮಾಲೆ, ಬೀಭಿತ್ಸ ಭಯಾನಕ ಅಸಹ್ಯಗಳ ಹಾಗು ಕಷ್ಟ ನಷ್ಟಗಳ ಸರಮಾಲೆ... ಅಬ್ಬಾ........ ಈ ಬ್ರಹ್ಮಸೃಷ್ಟಿ ಬಲು ಕಷ್ಟಕರವಾದುದಾಗಿದೆ. ನನ್ನ ನೆಚ್ಚಿನ ತಿಮ್ಮ ತಿಮ್ಮಯರಿಗೆ ಮನಕೆ ಮೋಹ-ಪ್ರೇಮ ತುಂಬಿದ ಸಿಹಿದಿನಗಳು ಹೆಚ್ಚಾಗಿರಲೆಂದು ಆಶಿಸುತಾ ಈ ರವಿಯು ನಿಮಗೆ ಶುಭದಿನದ ಜೊತೆ ಶುಭೋದಯ ಎನ್ನುತಾ ಕಾಯಕದೆಡೆಗೆ ರೈಟ್ ರೈಟ್ ಟ್ ಟ್ ಟ್ ಟ್

ಕೋಡುಗಲ್ಲನು ಹತ್ತಿ ದುರವನು ನೋಳ್ಪಂಗೆ
ಗೋಡೆಗುತ್ತುಗಳೇನು? ಮೇಡು ಕುಳಿಯೇನು?
ನೋಡು ನೀನುನ್ನತದಿ ನಿಂತು ಜನಜೀವಿತವ
ಮಾಡುದಾರದ ಮನವ - ಮಂಕುತಿಮ್ಮ
ಬೆಟ್ಟವನ್ನು ಹತ್ತಿ ಅದರ ತುತ್ತತುದಿಯಿಂದ ಎಷ್ಟು ದೂರಕೆ ಕಣ್ಣು ಹಾಯಿಸಿದರೂ ಅಡೆ ತಡೆ ಕಾಣಬಲ್ಲದೆ? ಹಾಗೆಯೇ ಹಳ್ಳ ದಿಣ್ಣೆಗಳು ಸಹ ಕಾಣದು ಅಲ್ಲವೆ? ಅಂತೆಯೇ ನನ್ನ ಮೆಚ್ಚಿನ ಸ್ನೇಹಿತರಾದ ನೀವು ಕೂಡ ಖಡ್ಡಾಯವಾಗಿ ಅತಿ ಎತ್ತರದಲ್ಲಿ ನಿಂತು ಜೀವನನ್ನು ನೋಡುತ್ತಲಿರಬೇಕು. ಅದಕ್ಕೆ ಮುಂಚೆ ನಿಮ್ಮ ಮನವು ಉದಾರವಾಗಿರಲೆಂದು ನನ್ನ ಹಾರೈಕೆ. ಇಷ್ಟೆಲ್ಲ ಗುಣಸಂಪನ್ನವಿರುವ ನಿಮ್ಮನ್ನು ಪಡೆದ ನಾನೇ ಧನ್ಯನಲ್ಲವೆ? ಸ್ನೇಹಿತರೆ ನಿಮಗೆ ಪ್ರೀತಿಯ ಶುಭದಿನ ಶುಭೋದಯ

ವ್ಯಾಮೋಹವಿರದ ಪ್ರೇಮ ನಿರ್ಭರವಿರಲಿ
ಭೀಮಸಾಹಸವಿರಲಿ ಹಗೆತನವನ್ನುಳಿದು
ನೇಮನಿಷ್ಟೆಗಳಿರಲಿ ಢಂಭಕಠಿನತೆಬಿಟ್ಟು
ಸೌಮ್ಯವೆಲ್ಲೆಡೆಯಿರಲಿ - ಮಂಕುತಿಮ್ಮ
ನೀವು ಸೂಸುವ ಪ್ರೇಮವು ಅತಿಯಾದ ವ್ಯಾಮೋಹವಿರದೆ ಸರಳವಾಗಿರಲಿ. ನಿಮ್ಮ ಬದುಕಿನಲ್ಲಿ ಅಪರಮಿತ ಸಾಹಸವೃತ್ತಿ ಇರಲಿ. ಆದರೆ ಅಲ್ಲಿ ವೈರತನ ಇಲ್ಲದಿರಲಿ. ಅದರ ಜೊತೆಜೊತೆಯಲ್ಲಿಯೇ ಅತಿ ಒರಟುತನ ಮತ್ತು ನಿಯಮ ನಿಷ್ಟೆಗಳಿರಲಿ... ಈ ಎಲ್ಲ ಸದ್ಗುಣಗಳ ಜೊತೆ ಸೌಮ್ಯತಾಭಾವ ಎಲ್ಲೆಲ್ಲೂ ಇರಲಿ... ಇಂಥಹ ಸ್ನೇಹಿತರನ್ನು ಪಡೆದ ನಾನೇ ಧನ್ಯ... ಪ್ರೇಮಪೂರ್ವಕವಾಗಿ ನಿಮ್ಮ ಈ ಸ್ನೇಹಿತನಾದ ರವಿಯು ನಿಮಗೆ ಹೇಳೊದು ಶುಭದಿನ ಶುಭೋದಯ

ಅಳುವೇನು? ನಗುವೇನು? ಹೃತ್ಕಪಾಟೋದ್ಚಾಟ
ಶಿಲೆಯೆ ನೀಂ ಕರಗದಿರಲ್? ಅರಲದಿರೆ ಮರಳೇಂ
ಒಳಜಗವ ಹೊರವಡಿಪ, ಹೊರಜಗವನೊಳಕೊಳುವ
ಸುಳುದಾರಿಯಳುನಗುವು - ಮಂಕುತಿಮ್ಮ
ಮಾನವ ನಗುತ್ತಿದ್ದರೂ ಸರಿಯೇ, ಅಳುತ್ತಿದ್ದರೂ ಸರಿ.. ಅದು ಅವನ ಹೃದಯದ ಬಾಗಿಲ ಕದವು ತೆರೆಯುವುದು. ಕೂಗಿಗೆ ಕರಗುತ್ತಾನೆ ಅಲ್ಲವೆ? ಆ ಹೃದಯದ ಕೂಗಿಗೆ ಕರಗಲೇಬೇಕು ಇಲ್ಲದಿದ್ದರೆ ಅವನೇನು ಕಲ್ಲೇ? ಅಥವ ಅರಳದೆ ಇರಲು ಮರಳೇ? ಒಟ್ಟಿನಲ್ಲಿ ಈ ಅಳು-ನಗುಗಳಾಂತರಗದಲ್ಲಿರುವುದನ್ನು ಬಹಿರಂಗಕ್ಕೆ ಅಂತೆಯೇ ಬಹಿರಂಗದಲ್ಲಿರುವುದನ್ನು ಅಂತರಂಗಕ್ಕೆ ಕೊಂಡೊಯ್ಯುವ ಸುಲಬ ಮಾರ್ಗವೇ ಅಗಿದೆಯಲ್ಲ ನನ್ನ ಜಾಣ ಜಾಣೆಯರೆ? ಎಂದಿನಂತೆ ನಿಮಗೆ ಪ್ರೀತಿಯ ಶುಬದಿನ ಶುಭೋದಯ

No comments:

Post a Comment