Tuesday, September 7, 2010

ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕರಿದು? |

ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕರಿದು?
ಕುಳಿ ಮೇಡು ದೂರ ಮತಿಮನಸುಗಳ ನಡುವೆ
ಒಳಗಿನಾಯಣ್ಣೇಬತ್ತಿಗಳೆರಡುಮೊಡವೆರೆಯೆ
ಬೆಳಕು ಜೀವೋನ್ನತಿಗೆ - ಮಂಕುತಿಮ್ಮ

ತಿಳಿದುಕೊಂಡಿದ್ದರೆ ಸಾಲದು ತಿಮ್ಮ/ತಿಮ್ಮಿಯರೆ.... ತಿಳಿದ ಒಳ್ಳೇಯದೆನಿಸಿದುದನ್ನು ನಮ್ಮ ನಡತೆಯಲ್ಲಿ ಜಾರಿಗೊಳ್ಳಿಸಬೇಕು. ಈ ಬಾಳ ದಾರಿಯಲ್ಲಿನ ಏರು-ಪೇರು, ನಮ್ಮ ಬುದ್ದಿ-ಮನಸ್ಸುಗಳನ್ನೇ ಎಣ್ಣೆ-ಬತ್ತಿಗಳಂತೆ ಒಂದುಗೂಡಿಸಿ ಬೆಳಗಿದರೆ ಅಹಾ... ಬೆಳಕು ದೊರೆತು ಬದುಕು ಸಾರ್ಥಕತೆ ಕಂಡೀತು.. ನೆಚ್ಚಿನ ಸ್ನೇಹಿತ/ಸ್ನೇಹಿತೆಯರೆಗೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ- ಶುಭದಿನ ಶುಭೋದಯ

ಎನ್ನ ಬೇಡಿಕೆ ನಷ್ಟವೆಹುದೆಂತು ದೇವನಿರೆ?
ಅನ್ಯಾಯ ಜಗವೆಲ್ಲ : ದೇವನಿರನೆನುತ
ತನ್ನ ತನ್ನನುಭವವ ನಂಬಲೋರೊರ್ವನುಂ
ಭಿನ್ನವಾಗದೆ ಸತ್ಯ? - ಮಂಕುತಿಮ್ಮ

ಸ್ನೇಹಿತರೆ, ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಅನ್ಯಾಯಕಾರನಾಗಿಯೇ ಕಾಣುತ್ತಾರೆ, ಆ ದೇವರೆಂಬುವವನು ನನಗೆ ಎನೂ ಮಾಡಲಿಲ್ಲ, ನನ್ನ ಬೇಡಿಕೆಗಳನ್ನು ಈಡೇರಿಸಲಿಲ್ಲ. ಈ ಜಗದಲ್ಲಿ ದೇವರೆಂಬುವವನು ಇಲ್ಲವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಆದರೆ ತಮ್ಮ ಅನುಬವವನ್ನೇ ಸತ್ಯ ಎಂದು ನಂಬುವವನ ಸತ್ಯವೇ ದೇವರಲ್ಲವೆ? ಅದೇ ನಮಗೆ ಆ ದೇವನು ಕೊಟ್ಟ ಜ್ಞಾನವೆಂದುಕೊಂಡರೆ ..... ಹುಂ ನನ್ನ ಜಾಣ ತಿಮ್ಮ/ತಿಮ್ಮಿಯರು ಸಹ ತಮ್ಮ ಅನುಭವಗಳನ್ನೇ ನಂಬಿ ನಡೆವವರೆಂದು ಹರ್ಷಿಸುತ್ತಾ ಎಂದಿನಂತೆ ನಿಮಗೆ ಶುಭದಿನ ಶುಭೋದಯ

ಶಕ್ತಿ ಮೀರ‍್ದ ಪರೀಕ್ಷೆಗಳನಿ ವಿಧಿ ನಿಯಮಿಸಿರೆ
ಯುಕ್ತಿಮಿರ‍್ದ ಪ್ರಶ್ನೆಗಳನು ಕೇಳುತಿರೆ
ಚಿತ್ತವನು ತಿರುಗಿಸೊಳಗಡೆ : ನೋಡು, ನೋಡಲ್ಲಿ
ಸತ್ತ್ವದಚ್ಚಿನ್ನ ಝರಿ - ಮಂಕುತಿಮ್ಮ

ಒಮ್ಮೊಮ್ಮೆ ವಿಧಿಯು ನಮ್ಮ ಶಕ್ತಿ ಮೀರಿ ಪರೀಕ್ಷೆಗಳನ್ನು ಒಡ್ಡಿದರೆ, ನಮ್ಮ ಜಾಣ್ಮೆಗೆ ಮೀರಿದ ಪ್ರಶ್ನೆಗಳನ್ನು ಕೇಳಿದರೆ ಹೆದರದೆ, ಅಂಜದೆ, ಅಳುಕದೆ ಸಾವಧಾನದಿಂದ ಲಕ್ಷ್ಯವನ್ನು ಕೊಟ್ಟುನೋಡಿ... ನಿರಂತರ ಸತ್ವದ ಚಿಲುಮೆಯೇ ಉಕ್ಕುತ್ತಿರುತ್ತದೆ.. ಜಾಣ್ಮೆಯಿಂದ ಜೀವನದ ಪರೀಕ್ಷೆಗಳನ್ನು ಎದುರಿಸಿದಲ್ಲಿ ನಮಗೆ ಸಮಸ್ಯೆಯೇ ಬರುವುದಿಲ್ಲ..... ಸ್ನೇಹಿತರೆ ನಿಮಗೆ ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಆಳವನು ನೋಡಿ ಬಗೆದಾಡುವಾ ಮಾತಿಂಗೆ
ರೂಡಿಯರ್ಥವದೊಂದು ಗೂಡಾರ್ಥವೊಂದು
ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು
ಕೋಲು ಹುಟ್ಟೊಂದು ಬಲ - ಮಂಕುತಿಮ್ಮ

ಮಾತು ಬಂಗಾರ, ಮೌನ ಬೆಳ್ಳಿ ಎಂದು ಹಿರಿಯರು ಬಹಳ ಹಿಂದೆಯೇ ಹೇಳಿದ್ದಾರೆ. ನಾವಾಡುವ ಮಾತು ಬಹಳ ಅಮೂಲ್ಯ, ಕೋಪದಲಿ ಹೇಳಿದ ಮಾತು ಒಮ್ಮೊಮ್ಮೆ ಸಂಬಂದಗಳನ್ನೇ ಕಡಿದುಬಿಡಬಹುದು. ಉದಾಹರಣೆಗೆ ಗಾಳಿಯ ಶಕ್ತಿ ಬಳಸಿ ಸಾಗಲು ಗಾಳಿಪಟವೊಂದು ಬೇಕಲ್ಲವೆ? ಅಂತೆಯೇ ನಮ್ಮ ಕಂಡು ಇತರರು ನಗಲಾರದಂತೆ, ಬೇಸರ ಪಡದಂತೆ ಇರಲು ನಾವಾಡುವ ಮಾತು ಬಹಳ ಮುಖ್ಯ. ನನ್ನ ತಿಮ್ಮಿ/ತಿಮ್ಮಂದಿರು ಮಾತು ಮುತ್ತಿಗೆ ಸಮವೆಂದು ಅರಿತು ಜಾಣ್ಮಿಯಿಂದ ವರ್ತಿಸುವರೆಂದು ಬಹಳ ಸಂತಸದಿಂದ ನಿಮಗೆ ಶುಭೋದಯ ಶುಭದಿನ ಹೇಳೋದು

No comments:

Post a Comment