Thursday, September 16, 2010

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯೆ?

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯೆ? |
ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ? ||
ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ? |
ಮೃಷೆಯೊ ಮೈಬೆಡಗೆಲ್ಲ - ಮಂಕುತಿಮ್ಮ ||

ಹೂವಿಗಿಂತ ಸುಕೋಮಲವಾಗಿರುವಂತಹುದು ಏನು ಸ್ನೇಹಿತರೆ?? ನಿಜ ಹೇಳಿ?? ನಾ ಹೇಳಲೆ? ಅದುವೇ "ಹೆಣ್ಣು" ಹೌದು, ಹೆಣ್ಣು ಕೋಮಲಾಂಗಿ, ಅಕೆಯ ಮೈಮಾಟ ವರ್ಣಿಸದಳ.. ಆಕೆಯನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಸುಂದರಿ, ವಯ್ಯಾರಿ.. ಇಡೀ ಜಗತ್ತೆ ಅಕೆಯ ಸೌಂದರ್ಯಕ್ಕೆ ಮರುಳಾಗಿ ಹೋಗಿದೆಯಲ್ಲವೆ? ಇನ್ನು ನೀವೆಲ್ಲಿ? ನಾನೆಲ್ಲಿ ಅವಳ ಸೌಂದರ್ಯಕ್ಕೆ ಸೋಲದಿರುವ ಧೀರರು ವೀರರು ಯಾರಿದ್ದಾರೆ? ಆದರೆ ಹೆಣ್ಣು ಸುಂದರವಾಗಿದ್ದರೆ ಸಾಕೆ? ಆಕೆಯ ಮನಸ್ಸು, ಬುದ್ದಿ, ವಿವೇಕ ಸಹ ಮೇಲೆ ಹೇಳಿದ ಸೌಂದರ್ಯದಷ್ಟೆ ಇದ್ದರೆ ನಿಜಕ್ಕೂ ಹೆಣ್ಣು ಅದ್ಬುತ.. ಆಕೆಯ ಸಾಮೀಪ್ಯ ಮನೋಲ್ಲಾಸ ನೀಡುತ್ತದೆ. ಅದುಬಿಟ್ಟು ಶೂರ್ಪಣಕಿ ಇಂತಹ ಮೈಮಾಟಗಳಿದ್ದರೂ, ಸುಂದರಿಯಾಗಿದ್ದರೂ ಕೆಟ್ಟಮನಸ್ಸಿನವಳಾಗಿದ್ದರಿಂದ ರಾಮನಿಂದ ಅವಳಿಗೆ ಲಾಭವಾಗಲಿಲ್ಲ.. ಹೆಣ್ಣಿನ ಕಣ್ಣುಗಳು ಮೀನಿಗೆ ಹೋಲಿಸುತ್ತೇವೆ. ಆದರೆ ಅಷ್ಟು ಸುಂದರವಾದ ಕಣ್ಣುಗಳ ಕೆಟ್ಟ ನೋಟದಿಂದಲೇ ಶೂರ್ಪಣಕಿ , ಪೂತನಿ ಕೆಟ್ಟರಲ್ಲವೆ?
ಆದರೆ ನನಗೆ ತಿಳಿದ ತಿಮ್ಮಿಯರು ಅಲ್ಲಲ್ಲ ನನ್ನ ಅಂತರ್ಜಾಲದ ಅರ್ಕುಟ್ ಸುಂದರಿಯರು ಮೈಮಾಟವಷ್ಟೆ ಅಲ್ಲದೆ ಕಣ್ಣೋಟ ಹಾಗು ಮನಸ್ಸು ಸಹ ಹಾಲಿನಂತೆ ಶುಭ್ರವಾಗಿದೆಯೆಂದು ನಾನು ಬಲ್ಲೆ ಹೌದಲ್ಲವೆ? ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ -

No comments:

Post a Comment