Wednesday, September 8, 2010

ಸಾಕುಸಾಕೆನಿಸುವುದು ಲೋಕಸಂಪರ್ಕಸುಖ

ಸಾಕುಸಾಕೆನಿಸುವುದು ಲೋಕಸಂಪರ್ಕಸುಖ |
ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ||
ಮೋಕನವೆ ತುರಿಸದೆ, ತುರಿಯುತಿರೆ ಹಣ್ಣುರಿತ |
ಮೂಕನಪಹಾಸ್ಯವದು - ಮಂಕುತಿಮ್ಮ ||

ನಮಗೆ ಒಮ್ಮೊಮ್ಮೆ ಈ ಪ್ರಪಂಚದ ಸಂಬಂಧಗಳು ಸಾಕಪ್ಪ ಸಾಕು ಅಂತ ಅನಿಸಿಬಿಡುತ್ತವೆ. ಸೋಕಿದರೆ ಮಾತ್ರ ಮತ್ತಷ್ಟು ಅಂಟಿಕೊಳ್ಳುವ, ಕೆರೆದರೆ ಮತ್ತಷ್ಟು ಕೆರೆದುಕೊಳ್ಳುವಂತೆ, ತುರಿಯಷ್ಟೂ ರುಚಿಯಾಗಿರುತ್ತದೆ. ಕೆರೆಯದಿದ್ದರೆ ಏನೋ ಮೂಕನವೆ, ಕೆರೆಯುತ್ತಿದ್ದರೆ ಗಾಯದ ಉರಿ... ಅಂತೆಯೇ ಗೆಳೆತನ, ಪ್ರೇಮ, ಪ್ರೀತಿಯ ಅನುಬಂಧಗಳು ಇವೆಲ್ಲವೂ ಹಾಗೆಯೇ ಇರುತ್ತದೆಯಲ್ಲವೆ? ಹತ್ತಿರವಾದರೆ ಮತ್ತೂ ಹತ್ತಿರ, ಇಲ್ಲವೆ ದೂರ ದೂರ... ಅಯ್ಯೋ ಇದು ಮೂಕ ಅಪಹಾಸ್ಯವಲ್ಲದೆ ನಮ್ಮಯ ಬದುಕು? ಈ ಮೂಕಾಪಹಾಸ್ಯದಲ್ಲಿ ನನ್ನ ಪಾತ್ರವೇನೆಂದರೆ ನಿಮಗೆ ದಿನವೂ ಕಗ್ಗದ ರೂಪದಲ್ಲಿ ಶುಭದಿನ ಶುಭೋದಯ ಹೇಳೋದು

No comments:

Post a Comment